ಶಿವಮೊಗ್ಗ ಮೃಗಾಲಯದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ಅತ್ಯಂತ ಸುರಕ್ಷಿತ ಸಫಾರಿ ವ್ಯವಸ್ಥೆ


ಪ್ರಕೃತಿ ಮತ್ತು ಮನುಷ್ಯರ ನಡುವೆ ಸಂಘರ್ಷ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಡು ಪ್ರಾಣಿ ಹಾಗೂ ಪಕ್ಷಿಗಳ ಅಗತ್ಯತೆಯನ್ನು ಭವಿಶ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ತ್ಯಾವರೆಕೊಪ್ಪ ಸಿಂಹಧಾಮ ಆಡಳಿತವು ಮೃಗಾಲಯವು ನಿಮ್ಮ ಶಾಲೆ ಬಾಗಿಲಲ್ಲಿ ಎಂಬ ಯೋಜನೆಯನ್ನು ರೂಪಿಸಿದೆಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಾಗಿಯೇ ಯೋಜನೆ ರೂಪವಾಗಿದ್ದು, 12 ವರ್ಷ ಮೇಲ್ಪಟ್ಟವರಿಗೆ 230 ರೂ. ಹಾಗೂ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ 160 ರೂ. ಶುಲ್ಕ ನಿಗಧಿಪಡಿಸಲಾಗಿದೆನಿರ್ಧಿಷ್ಟ ಸಂಖ್ಯೆಯ ವಿದ್ಯಾರ್ಥಿಗಳ ಸಿಕ್ಕ ನಂತರ ಸಂಬಂಧಪಟ್ಟ ಶಾಲೆಗೆ ಸಫಾರಿಯ ವಾಹನ ಆಗಮನಿಸಿ, ಅವರನ್ನು ತ್ಯಾವರೆಕೊಪ್ಪದ ಸಫಾರಿಗೆ ಶಾಳೆಯ ಶಿಕ್ಷಕರೊಂದಿಗೆ ಕರೆದೊಯ್ಯುತ್ತದೆ